"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||
ಎಲ್ಲಿದೆ ನಂದನ ಎಲ್ಲಿದೆ ಬಂಧನಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ ||
ಹತ್ತಿರವಿದ್ದೂ ದೂರ ನಿಲ್ಲುವೆವುನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದುನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||
ಸಾಹಿತ್ಯ – ಜಿ ಎಸ್ ಶಿವರುದ್ರಪ್ಪ ಸಂಗೀತ / ಗಾಯನ – ಸಿ ಅಶ್ವಥ್
I searched elsewhere for god who is not therein the temples of stone and mud
missing to see the friendliness and love that is right here amongst us
Where is nandan, where is bandhan every thing is within us
without knowing what lies withinhow can tongue taste the sweetness
Though we are nearest we stand afar in the fort of the ego
what a great trouble unable to accommodatein the short life of four days
--------g s siva rudrappa"
No comments:
Post a Comment