ಬೆಂಗಳೂರು: ಟಿಪ್ಪು ಜಯಂತಿ ಆಚರಣೆಗೆ ಸಿಎಂ ಕುಮರಸ್ವಾಮಿ ಹಾಗೂ ಡಿಸಿಎಂ ಗೈರುಹಾಜರಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಸಿಎಂ ಹಾಗೂ ಡಿಸಿಎಂ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ನಾನು ರಾಜಕೀಯ ಹೊರತುಪಡಿಸಿ ಮಾತನಾಡುತ್ತಿದ್ದೇನೆ. ಸಿಎಂ ಅನಾರೋಗ್ಯ ಕಾರಣಗಳಿಂದ ಗೈರಾಗುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಸಿಎಂ ಇನ್ನಾದರೂ ಎಲ್ಲಿದ್ದಾರೋ ಅ ಸ್ಥಳದಲ್ಲಿಯೇ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗ ವಹಿಸಬೇಕು ಎಂದು ಮಾಧ್ಯಮಗಳ ಮೂಲಕ ಸಿಎಂ ಹೆಚ್ಡಿಕೆಗೆ ಶಾಸಕ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.
ಇನ್ನು ಎಲ್ಲೆಡೆ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಈ ಬಗ್ಗೆಯೂ ಮಾತನಾಡಿದ ಅವರು ಪೊಲೀಸ್ ನಿರ್ಬಂಧ ಹೇರಿ ಕಾರ್ಯಕ್ರಮ ಆಚರಣೆ ಮಾಡುವ ರೀತಿ ಸರಿಯಲ್ಲ. ಕರ್ಫ್ಯೂ ಹೇರಿದ ಹಿನ್ನೆಲೆ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ. ಬೈಕ್ ನಲ್ಲಿ ಇಬ್ಬರು ಬಂದರೂ ಕೂಡ ಪೊಲೀಸರು ಪ್ರಶ್ನಿಸುತ್ತಾರೆ ಇದು ಸರಿಯಲ್ಲ ಎಂದಿದ್ದಾರೆ.

No comments:
Post a Comment