Saturday, March 30, 2019

ತೋಟಕೆ ಹೋಗೋ ತಿಮ್ಮ

ತೋಟಕೆ ಹೋಗೋ ತಿಮ್ಮ
ತೋಳ ಬಂದೀತಮ್ಮ
ಹಸು ಮೈಸೋ ತಿಮ್ಮ
ಹಸು ಹಾದೀತಮ್ಮ
ಓಲೆ ಉರಿಸೋ ತಿಮ್ಮ
ಉರಿ ಸುಟ್ಟೀತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲ ಅಮ್ಮ
ನೀರು ಸೇದೋ ತಿಮ್ಮ
ಕೈಯ್ಯಿ ನೋವು ಅಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವು ಅಮ್ಮ
ಹೂವು ಬಿಡಿಸೊ ತಿಮ್ಮ
ಹಾವು ಬಂದೀತಮ್ಮ
ಊಟಕೆ ಬಾರೋ ತಿಮ್ಮ
ಓಡಿ ಬಂದೆನಮ್ಮ
Author: Unknown

Sunday, March 24, 2019

ಆನಂದಮಯ ಈ ಜಗಹೃದಯ || Anandamaya ee jagahrudaya

ಆನಂದಮಯ ಈ ಜಗಹೃದಯ || Anandamaya ee jagahrudaya